`ಭುಜಂಗ` ತಾಯಿ-ಮಗನ ಮಮತೆ ವಾತ್ಸಲ್ಯ ಸೆರೆ
Posted date: 23 Sat, May 2015 – 08:36:57 AM

‘ಭುಜಂಗ’ ಕನ್ನಡ ಸಿನಿಮಾದ ವಾತ್ಸಲ್ಯಮಯ, ಪ್ರೀತಿ, ಹಾಸ್ಯ ತುಂಬಿದ ಸನ್ನಿವೇಶ ಹೊಂದಿರುವ ತಾಯಿ ಹಾಗೂ ಮಗನ ದೃಷ್ಯಾವಳಿಗಳನ್ನು ಮೈಸೂರಿನಲ್ಲಿ ಸೆರೆ ಹಿಡಿಯಲಾಯಿತು. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಸರಾಗವಾಗಿ ಸಾಗುತ್ತಿದೆ.
ನಾಯಕ ಪ್ರಜ್ವಲ್ ದೇವರಾಜ್ ಕುರಿತು ನಾಯಕಿ ಮೇಘನ ರಾಜ್ ನಿನ್ನ ಮುಖ ಕನ್ನಡಿನಲ್ಲಿ ನೋಡಿದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಆಗ ನಾಯಕ ಕನ್ನಡಿ ಮುಂದೆ ನಿಂತು ಅಮ್ಮನನ್ನು ಉದ್ದೇಶಿಸಿ ‘ಹೃತಿಕ್ ರೋಶನ್ ಅಥವಾ ಶಾರೂಖ್ ಖಾನ್ ರೀತಿ ನನ್ನ ಹೆರಬಾರದಿತ್ತ ಅನ್ನುತ್ತಾನೆ. ಅದಕ್ಕೆ ತಾಯಿ ಪಾತ್ರದ ಕಲ್ಯಾಣಿ ‘ಹೊಗ್ ನಿಮ್ಮಪ್ಪನ್ನ ಕೇಳು’ ‘ಹಲಸಿನಕಾಯಿ ತಿಂದು ಆಪಲ್ ರೀತಿ ಆಗಬೇಕು ಅಂದರೆ ಹೆಂಗೆ’ ಎಂದಲ್ತಿರುಗೇಟು ನೀಡುತ್ತಾಳೆ. ಈ ತಾಯಿ ಮಗನ ಮಾತಿನ ಭರಾಟೆಯನ್ನು ಇತ್ತೀಚಿಗೆ ಮೈಸೂರಿನ ಸರಸ್ವತಿಪುರಂ ಮನೆಯೊಂದರಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಬಿ.ಎ ಮಧು ಅವರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಜೀವ ಅವರು ನಿರ್ದೇಶಕರು. ಚಾಮರಾಜನಗರದ ವರುಣ್ ಮಹೇಶ್ ಅವರು ನಿರ್ಮಾಪಕರು. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೋಷಕ ಕಲಾವಿದರಲ್ಲಿ ಕಲ್ಯಾಣಿ, ಭಜರಂಗಿ ಚೇತನ್, ಕರಿಸುಬ್ಬು ಮತ್ತಿತರರಿದ್ದಾರೆ.

                      

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed